ಕಚೇರಿಗೆ ಚಕ್ಕರ್ ಹಾಕಿ ಹೋಟೆಲ್‌ನಲ್ಲಿ ಕಾಲಹರಣ: ಆಲಮೇಲ ಆಹಾರ ನಿರೀಕ್ಷಕನ ವಿರುದ್ಧ ಜಿಲ್ಲಾಧಿಕಾರಿಗೆ ದೂರು!

Written by

in

ವಿಜಯಪುರ : ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕಾದ ಅಧಿಕಾರಿಯೊಬ್ಬರು ಕಚೇರಿಗೆ ಬಾರದೆ ಹೋಟೆಲ್‌ನಲ್ಲಿ ಕಾಲಹರಣ ಮಾಡುತ್ತಿದ್ದಲ್ಲದೆ, ಪ್ರಶ್ನಿಸಿದ ಸಾರ್ವಜನಿಕರ ವಿರುದ್ಧ ಉದ್ಧಟತನ ತೋರಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಆಲಮೇಲ ತಾಲೂಕಿನ ಆಹಾರ ನಿರೀಕ್ಷಕರಾದ (Food Inspector) ರಮೇಶ್ ತಳವಾರ್ ಅವರ ವಿರುದ್ಧ ಈಗ ಜಿಲ್ಲಾಧಿಕಾರಿಗಳಿಗೆ ಗಂಭೀರ ದೂರು ಸಲ್ಲಿಕೆಯಾಗಿದೆ.​ಕಚೇರಿ ಇದ್ದರೂ ಸಿಂದಗಿಯಲ್ಲಿ ವಾಸ್ತವ್ಯ!​ಆಲಮೇಲ ತಹಶೀಲ್ದಾರ್ ಕಚೇರಿಯಲ್ಲಿ ಆಹಾರ ನಿರೀಕ್ಷಕರಿಗೆ ಕುಳಿತು ಕೆಲಸ ಮಾಡಲು ಪೀಠೋಪಕರಣ ಸೇರಿದಂತೆ ಎಲ್ಲಾ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಆದರೆ, ಈ ಅಧಿಕಾರಿಯು ಮಾತ್ರ ಆಲಮೇಲ ಕಚೇರಿಗೆ ಬಾರದೆ ಸಿಂದಗಿಯಲ್ಲೇ ಬೀಡು ಬಿಟ್ಟಿರುತ್ತಾರೆ. ಈ ಕುರಿತು ಸಾರ್ವಜನಿಕರು ಫೋನ್ ಮಾಡಿ ವಿಚಾರಿಸಿದರೆ, “ವಿಜಯಪುರ ಜಿಲ್ಲಾ ಕಚೇರಿಗೆ ಹೋಗಿದ್ದೆ” ಅಥವಾ “ಗೋದಾಮಿನಲ್ಲಿ (ದಾಸ್ತಾನು ಕೋಣೆ) ಕೆಲಸವಿತ್ತು” ಎಂದು ನೆಪಗಳನ್ನು ಹೇಳುತ್ತಾ ಕಚೇರಿಗೆ ಬಾರದೆ ಸತಾಯಿಸುತ್ತಿದ್ದಾರೆ ಎಂದು ಅಂಬೇಡ್ಕರ್ ಸೇನೆ ಸಂಘಟನೆ ಆರೋಪಿಸಿದೆ.

Comments

Leave a Reply

Your email address will not be published. Required fields are marked *