• Wed. Sep 9th, 2026

ಮುಂಗಾರಿನ ಬಿತ್ತನೆ ಬಿಜಗಳ ಖರಿದಿಗೆ ಮುಗಿಬಿದ್ದ ರೈತರು.

ByAnand

Jun 30, 2026

ವರದಿ. ಆನಂದ್. ಅಗರಖೇಡ ಝಳಕಿ

ಬರಗಾಲದ ಅಂಜಿಕೆಯಂದಾಗಿ ರೈತ ಬಿತ್ತನೆ ಬಿಜಗಳು ರೈತ ಸಂಪರ್ಕ ಕೆಂದ್ರ ವಿತರಣೆ ಪ್ರಾರಂಭಿಸಿದ್ದರು ಇತ್ತ ಇಣುಕಿದ್ದಿಲ್ಲ , ಎರಡು ದಿನಗಳು ಸುರಿದ ಮಳೆಗೆ ರೈತನ ಮೊಗದಲ್ಲಿ ಮೂಡಿದ ಮಂದಹಾಸ, ಇವಾಗ ಬಳ್ಳೊಳ್ಳಿ ರೈತ ಸಂಪರ್ಕ ಕೆಂದ್ರದತ್ತ ಎಲ್ಲ ಗ್ರಾಮಗಳಿಂದ ರೈತರು ಧಾವಿಸಿ ಬರುತಿದ್ದಾರೆ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ನರಸಪ್ಪ ಹಿಟ್ನಳ್ಳಿ ತಿಳಿಸಿದರು.ಬಳ್ಳೊಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಬಿಜಗಳ ಖರಿದಿಗೆ ಮುಗಿಬಿದ್ದ ರೈತರು. ಬಿಜಗಳು ಕೊಡಬೆಕಾದರೆ ಕೇವಲ ಆಧಾರ ಕಾರ್ಡ ತಂದರೆ ಸಾಕು ಕೊಡಲಾಗುವದು ಮತ್ತು ಬಿಜಗಳನ್ನು ಆನ್ಲೈನ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಕೊಡುವದರಿಂದ ಸ್ವಲ್ಪ ಮಟ್ಟಿಗೆ ವಿಳಂಬವಾಗುತಿದ್ದು, ರೈತರು ಸರದಿಯಾಗಿ, ಸಹನೆಯಿಂದ, ಶಾಂತತೆ ಕಾಪಾಡಿದಾಗ ಸಿಬ್ಬಂದಿಗಳು, ವಿತರಣೆ ಮಾಡಲು ಸರಳವಾಗುತ್ತದೆ, ತೋಗರೆ ಬಿಜ (ಟಿ.ಎಸ್೩ ಆರ್), ಮೆಕ್ಕೆಜೋಳದಲ್ಲಿ ರಾಯಲ್ ಗೊಲ್ಡ, ಕಾವೇರಿ, ಸಿನಜೇಂಟಾ, ಗಂಗಾ ಕಾವೇರಿ, ವರ್ಷಾ ಅಗ್ರೋ, ನ್ಯೂಜಿನ್ಸ, ಬಸಗಿನ್ನಿ, ಮಾದರಿಯ ಬಿಜಗಳು ಲಭ್ಯವಿದೆ ಎಂದರು.

By Anand

ಸಿಂಧೂರ ಸಾಮ್ರಾಜ್ಯ 24x7 ನ್ಯೂಸ್

Leave a Reply

Your email address will not be published. Required fields are marked *