
ಬಿ.ಡಿ.ಪಾಟೀಲ
ವರದಿ. ಆನಂದ. ಅಗರಖೇಡ
ಇಂಡಿ: ಅಗಷ್ಟ್ ೨೩ರಂದು ವಿಜಯಪುರ ನಗರದಲ್ಲಿ ನಡೆಯಲ್ಲಿರುವ ರಾಜ್ಯಮಟ್ಟದ ಸಂಗೊಳ್ಳಿ ರಾಯಣ್ಣ ಜಾತ್ರೆ ಉತ್ಸವ ಜರುಗಲಿದ್ದು, ಇಂಡಿ ತಾಲ್ಲೂಕಿನಿಂದ ಸಾವಿರಾರು ಜನ ಅಭಿಮಾನಿಗಳು ಹಾಗೂ ಹಾಲುಮತ ಸಮಾಜದ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದು ಬಿ.ಡಿ.ಪಾಟೀಲ ತಿಳಿಸಿದರು.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಲಜಂತಿ ಮಾಳಿಂಗರಾಯ ಮಹಾರಾಜರು ಹಾಗೂ ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ ಜಾಲಗೇರಿ, ರೇವಣಸಿದ್ದಗೌಡ ಗೋಡಕೆ ಅವರ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದರು.ರಾಯಣ್ಣನ ಜಾತ್ರೆಯಲ್ಲಿ ಕೇವಲ ಕುರುಬ ಸಮುದಾಯದ ಜನರು ಅಷ್ಟೇ ಅಲ್ಲದೆ, ರಾಯಣ್ಣನ ಅಭಿಮಾನಿಗಳು, ಕಿತ್ತೂರ ರಾಣಿ ಚೆನ್ನಮ್ಮನ ಅಭಿಮಾನಿಗಳು ಕೂಡ ಭಾಗವಹಿಸಲಿದ್ದಾರೆ. ರಾಜ್ಯಮಟ್ಟದ ಕಾರ್ಯಕ್ರಮ ವಾಗಿದ್ದರಿಂದ ರಾಜ್ಯದ ವಿವಿಧ ಮಠದೀಶರು ವಿವಿಧ ಜಿಲ್ಲೆಗಳಿಂದ ಸುಮಾರು ಒಂದು ಲಕ್ಷಕ್ಕೆ ಹೆಚ್ಚು ಜನ ಸೇರುವುದರಿಂದ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದರು. ಸಂಗೊಳ್ಳಿ ರಾಯಣ್ಣನ ಅವರ ಆದರ್ಶ ಹಾಗೂ ದೇಶಭಕ್ತಿಯನ್ನು ಸ್ಮರಿಸುವ ಜೊತೆಗೆ ಸಮಾಜದ ಒಗ್ಗಟ್ಟಿನ ಪ್ರದರ್ಶನ ಮಾಡುವ ಉದ್ದೇಶ ಹೊಂದಲಾಗಿದೆ ಎಂದ ಅವರು, ನಗರದ ಸಿದ್ದೇಶ್ವರ ದೇವಸ್ಥಾನದಿಂದ ದರ್ಬಾರ್ ಕಾಲೇಜು ಮೈದಾನದವರೆಗೆ ೧೨ ಅಡಿ ಎತ್ತರದ ಸಂಗೊಳ್ಳಿ ರಾಯಣ್ಣ ಮೂರ್ತಿಯ ಮೆರವಣಿಗೆ ಮರವಣಿಗೆ ಸಕಾಲ ವಾದ್ಯ ವೈಭವ ಹಾಗೂ ಗ್ರಾಮೀಣ ಭಾಗದ ಕಲಾತಂಡಗಳಿನಿಂದ ಬ್ರಹತ್ಮೆ ರವಣಿಗೆ ಮೂಲಕ ವಿವಿಧ ವೃತ್ತಗಳ ಮೂಲಕ ಕಾರ್ಯಕ್ರಮ ಸ್ಥಳಕ್ಕೆ ಮೆರವಣೆಗೆ ಜರುಗಲಿದೆ ಎಂದರು.