• Wed. Sep 9th, 2026

ಬಣಜಿಗ ಸಮುದಾಯ ೨ ಎ ದಲ್ಲಿ ಮುಂದುವರೆಸಲು ಆಗ್ರಹಿಸಿ ಪ್ರತಿಭಟನೆ

ByAnand

Aug 22, 2026

ಇಂಡಿ

ಬಣಜಿಗ ಸಮುದಾಯವನ್ನು ಪ್ರವರ್ಗ ೨ ಎ ಅಡಿಯಲ್ಲಿಯೇ ಮುಂದುವರೆಸಿ ಉದ್ಯೋಗ ಮಿಸಲಾತಿ ಸೌಲಭ್ಯವನ್ನು ಮುಂದುರೆಸುವಂತೆ ಆಗ್ರಹಿಸಿ ಇಂದು ಬಣಜಿಗ ಸಮುದಾಯವದರು ಆಡಳಿತಸೌಧ ಎದುರು ಪ್ರತಿಭಟನೆ ನಡೆಸಿದರು.ಸಂಗಣ್ಣ ಈರಾಬಟ್ಟೆ ಮಾತನಾಡಿ ಬಣಜಿಗ ಸಮುದಾಯದ ಶೈಕ್ಷಣಿಕ ಹಾಗೂ ಸಾಮಾಜಿಕ ಹಿತಾಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ಯಾವದೇ ಗೊಂದಲಕ್ಕೆ ಅವಕಾಶ ನಿಡದೇ ಪ್ರವರ್ಗ ೨ ಎ ಅಡಿಯಲ್ಲಿಯೇ ಮಿಸಲಾತಿ ಸೌಲಭ್ಯ ಮುಂದು ವರೆಸಲು ಆಗ್ರಹಿಸಿದರು.ಸಂತೋಷ ಪಾಟೀಲ ಮಾತನಾಡಿ ಕರ್ನಾಟಕ ಉಚ್ಚ ನ್ಯಾಯಾಲಯದ ಕಲಬುರಗಿ ಪೀಠದಲ್ಲಿ ವಿಚಾರಣೆಗೆ ಬಂದಿದ್ದ ಪ್ರಕರಣವೊಂದರಲ್ಲಿ ಬಣಜಿಗ ಸಮುದಾಯವನ್ನು ಉದ್ಯೋಗದ ಉದ್ದೇಶಕ್ಕಾಗಿ ಒಂದು ಪ್ರವರ್ಗ ಹಾಗೂ ಶಿಕ್ಷಣದ ಉದ್ದೇಶಕ್ಕಾಗಿ ಮತ್ತೊಂದು ಪ್ರವರ್ಗ ದಲ್ಲಿ ವರ್ಗಿಕರಿಸಿರುವದು ಸಂವಿಧಾನದ ಆಶಯಕ್ಕೆ ವಿರುದ್ಧವಾಗುತ್ತದೆ ಎಂಬ ವಿಚಾರವನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.ಸಂತೋಷ ಸಂಖ, ಸಿದ್ದರಾಮ ಲಬ್ಬಾ, ಬಸವರಾಜ ನಿಚ್ಚಳ, ಶಿವಾನಂದ ಅಂಗಡಿ, ರವಿ ನಿಗಡಿ, ಗಿರೀಶ ಪೋಪಡಿ, ಪ್ರಭು ನಾಡಗೌಡ, ಅನೀಲ ಝಂಪಾ, ಸುನೀಲ ರಬಶೆಟ್ಟಿ, ಶಿವಪುತ್ರ ಕಡಕೋಳ, ಉಮೇಶ ಇಂಗಳೇಶ್ವರ ಮತ್ತಿತರಿದ್ದರು. ಶಿರಸ್ತೆದಾರ ಎಸ್.ಆರ್ ಮುಜಗೊಂಡ ಇವರಿಗೆ ಮನವಿ ಸಲ್ಲಿಸಿ ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.. ಫೋಟೋ- ೨೧ ಇಂಡಿ ೦೧ ಬಣಜಿಗ ಸಮುದಾಯವನ್ನು ಪ್ರವರ್ಗ ೨ ಎ ಅಡಿಯಲ್ಲಿಯೇ ಮುಂದುವರೆಸಿ ಆಗ್ರಹಿಸಿ ಇಂದು ಬಣಜಿಗ ಸಮುದಾಯವದರು ಆಡಳಿತಸೌಧ ಎದುರು ಪ್ರತಿಭಟನೆ ನಡೆಸಿದರು.

By Anand

ಸಿಂಧೂರ ಸಾಮ್ರಾಜ್ಯ 24x7 ನ್ಯೂಸ್

Leave a Reply

Your email address will not be published. Required fields are marked *