• Wed. Sep 9th, 2026

ಬಳ್ಳೊಳ್ಳಿ ಗ್ರಾಮದಲ್ಲಿ ಮತದಾರರ ಮತ ಪಟ್ಟಿ ಪರಿಸ್ಕರಣೆ ಚಾಲನೆ.

ByAnand

Jun 30, 2026

ವರದಿ ಆನಂದ್. ಅಗರಖೇಡ ಝಳಕಿ.ಎಲ್ಲರು ಮತದಾರರ ಪಟ್ಟಿ ಪರಿಸ್ಕರಣೆಗೆ ಸಹಕರಿಸಿ, ನಿಜವಾದ ಮತದಾನ ಪಟ್ಟಿ ರೂಪಿಸಲು ಮತ್ತು ನಕಲಿ ಮತದಾನ ಹೋಗಲಾಡಿಸೋಣ ಎಂದು ಗ್ರಾಮದ ಮುಖಂಡರು ಭೀಮಾಶಂಕರ ವಾಲಿಕಾರ ಹೇಳಿದರು. ಬಳ್ಳೊಳ್ಳಿ ಗ್ರಾಮದಲ್ಲಿ ಗ್ರಾಮದ ಬಿ. ಎಲ್. ಓ ಮತ್ತು ಮುಖಂಡರ ಸಹಯೋಗದಲ್ಲಿ ಚಾಲನೆ ನೀಡಲಾಯಿತು. ಬಿಇ. ಎಲ್. ಓ ಸೋಮಶೇಖರ್ ಕಾಪಸೆ ಮಾತನಾಡಿ ಎನ್ಯೂಮರೇಶನ ಫಾರ್ಮನಲ್ಲಿ ಸರಿಯಾದ ಮಾಹಿತಿ ಕೊಡದೆ ಹೋದಲ್ಲಿ ನಿಮ್ಮ ಮತದಾನ ರದ್ದಾಗುವ ಸಂಭವವಿದ್ದು, ಎಲ್ಲರು ತಮ್ಮ ಮನೆಯ ಎಲ್ಲ ಸದಸ್ಯರ ಸರಿಯಾದ ಮಾಹಿತಿ ಕೊಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಹಜರತ ಮುಲ್ಲಾ, ಭೀರಪ್ಪ ಹಿರೇಕುರುಬರ, ಮಲ್ಲಿಕಾರ್ಜುನ ಹಿರೇಮಠ, ಸ್ನೇಹಾ ಹಿರೇಮಠ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

By Anand

ಸಿಂಧೂರ ಸಾಮ್ರಾಜ್ಯ 24x7 ನ್ಯೂಸ್

Leave a Reply

Your email address will not be published. Required fields are marked *