*ಇಂಡಿ:

ಬಿ ಎಲ್ ಓ (Booth Level Officer) ಎಂದರೆ ಭಾರತೀಯ ಚುನಾವಣಾ ಆಯೋಗದ (ECI) ವತಿಯಿಂದ ನೇಮಕಗೊಂಡ ಬೂತ್ ಮಟ್ಟದ ಅಧಿಕಾರಿಯಾಗಿದ್ದಾರೆ.ಇವರು ಸ್ಥಳೀಯ ಸರ್ಕಾರಿ ನೌಕರರಾಗಿರುವ ಇವರು,ತಮ್ಮ ವ್ಯಾಪ್ತಿಯ ಮತದಾರರ ಪಟ್ಟಿಯನ್ನು ನಿಖರವಾಗಿಡುವುದು, ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕುವುದು ಮತ್ತು ಚುನಾವಣಾ ಪ್ರಕ್ರಿಯೆಗಳು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುವುದು ಇವರ ಮುಖ್ಯ ಕರ್ತವ್ಯವಾಗಿದೆ. ಆದರೆ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ವಾರ್ಡ್ ನಂಬರ್ 7ರ ಬಿಎಲ್ಓ ಲಕ್ಷ್ಮಣ್ ವಿಠೋಬಾ ಕೊಂಕಣಿ ಅವರು ತಮ್ಮ ಪ್ರಮುಖ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಮರೆತು ತಮಗೆ ಅನುಕೂಲವಾಗುವಂತೆ ತಡವಲಗಾ ಗ್ರಾಮದ ಕಕ್ಕಯ ಓಣಿಯಲ್ಲಿ ಇರುವ ಶ್ರೀ ಅಂಬಾಭವಾನಿ ಮಂದಿರದಲ್ಲಿ ಕುಳಿತು ಕಾರ್ಯನಿರ್ವಾಹಕ ಮಾಡುತ್ತಿರುವುದು ಕಂಡು ಬಂದಿದೆ. ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ನೋಂದಣಿ:ಮನೆ-ಮನೆ ಸಮೀಕ್ಷೆ: ನಿಗದಿತ ನಮೂನೆ (ಫಾರಂ) ಗಳನ್ನು ಬಳಸಿಕೊಂಡು ಮನೆ-ಮನೆಗೆ ಖುದ್ದಾಗಿ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸುವುದು.ಹೊಸ ಮತದಾರರ ಸೇರ್ಪಡೆ: 18 ವರ್ಷ ತುಂಬಿದ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲು (ಫಾರಂ-6) ಸಹಾಯ ಮಾಡುವುದು.ಹೆಸರು ತೆಗೆದುಹಾಕುವುದು / ತಿದ್ದುಪಡಿ: ಮೃತಪಟ್ಟವರ ಅಥವಾ ಬೇರೆಡೆ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು (ಫಾರಂ-7) ಮತ್ತು ತಪ್ಪುಗಳಿದ್ದರೆ ತಿದ್ದುಪಡಿ ಮಾಡಲು (ಫಾರಂ-8) ಅರ್ಜಿಗಳನ್ನು ಸ್ವೀಕರಿಸುವುದು.ಆಧಾರ್ ಲಿಂಕ್: ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಿಸುವುದನ್ನು (ಫಾರಂ-6B) ಖಚಿತಪಡಿಸುವುದು.ಚುನಾವಣಾ ದಿನದ ಕರ್ತವ್ಯಗಳು:ಮತಗಟ್ಟೆ ನಿರ್ವಹಣೆ ಮತ್ತು ಮತದಾರರಿಗೆ ಮಾರ್ಗದರ್ಶನ ನೀಡುವುದು ಇವರ ಕರ್ತವ್ಯವಾಗಿದೆ.ಆದರೆ ಚುನಾವಣೆ ಆಯೋಗ ಎಲ್ಲ ಆದೇಶವನ್ನು ಗಾಳಿಗೆ ತೂರಿ ತಮ್ಮ ಹತ್ತಿರವೆ ಮತದಾರರು ಬರಬೇಕು ಎನ್ನುವಂತೆ ಕಾರ್ಯ ನಿರ್ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Leave a Reply