• Wed. Sep 9th, 2026

ಮುಖ್ಯ ರಸ್ತೆಯಲ್ಲಿ ಗುಂಡಿಗಳದ್ದೇ ದರ್ಬಾರ್: ಮ್ಯಾಗೇರಿ ಅವರ ಮನೆ ಬಳಿ ವಾಹನ ಸವಾರರ ಪರದಾಟ

ByAnand

Aug 10, 2026

ಇಂಡಿ: ತಾಲೂಕಿನ ತಾಂಬಾ ಗ್ರಾಮದ ಹಿರೇಮಸಳಿ ಹಾಗೂ ಬಂಥನಾಳದ ಮುಖ್ಯ ರಸ್ತೆಯ ಮ್ಯಾಗೇರಿ ಅವರ ಮನೆ ಸಮೀಪ ರಸ್ತೆ ಸಂಪೂರ್ಣವಾಗಿ ಹದಗೆಟ್ಟು, ಗುಂಡಿಗಳು ನಿರ್ಮಾಣಗೊಂಡಿವೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಈ ಕುರಿತು ಲೋಕೋಪಯೋಗಿ ಇಲಾಖೆ ಇಂಡಿ ಉಪ ವಿಭಾಗ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

By Anand

ಸಿಂಧೂರ ಸಾಮ್ರಾಜ್ಯ 24x7 ನ್ಯೂಸ್

Leave a Reply

Your email address will not be published. Required fields are marked *