
ಇಂಡಿ | ಆತ್ಮ ಹಿರೇಮಠ ಕೇಂದ್ರ ಸರ್ಕಾರದ ನ್ಯಾಯವಾದಿಯಾಗಿ ನೇಮಕ..! ಇಂಡಿ : ಬೆಂಗಳೂರಿನ ಉಚ್ಛ ನ್ಯಾಯಾಲಯದಲ್ಲಿ (High Court) 15 ವರ್ಷಗಳಿಂದ ವಕೀಲ ವೃತ್ತಿ ಸಲ್ಲಿಸುತ್ತಿರುವ ಯುವ ವಕೀಲರಾದ ಆತ್ಮ ವಿ. ಹಿರೇಮಠ ಅವರಿಗೆ ಸಿಕ್ಕಿರುವ ಅತ್ಯಂತ ಜವಾಬ್ದಾರಿಯುತ ಹುದ್ದೆ ಇದಾಗಿದೆ.ಕಳೆದ 8 ವರ್ಷಗಳಿಂದ ಕೇಂದ್ರ ಸರ್ಕಾರದ ವಕೀಲರಾಗಿ ಸುದೀರ್ಘ ಹಾಗೂ ದಕ್ಷ ಸೇವೆಯನ್ನು ಪರಿಗಣಿಸಿ, ಕೇಂದ್ರ ಸರ್ಕಾರವು ಅವರನ್ನು ಕೇಂದ್ರ ಸರ್ಕಾರದ ವಕೀಲರನ್ನಾಗಿ (Central Government Counsel) 3 ವರ್ಷಗಳ ಅವಧಿಗೆ ನೇಮಕ ಮಾಡಿ ಆದೇಶ ಹೊರಡಿಸಿರುವುದು ಅವರ ವೃತ್ತಿಪರತೆಗೆ ಸಂದ ಗೌರವವಾಗಿದೆ.ಈ ನೇಮಕಾತಿಯ ಮೂಲಕ ಅವರು ಮುಂದಿನ 3 ವರ್ಷದ ಅವಧಿಗೆ ಉಚ್ಛ ನ್ಯಾಯಾಲಯದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಪ್ರಮುಖ ಕಾನೂನು ಪ್ರಕ್ರಿಯೆಗಳನ್ನು ಹಾಗೂ ಪ್ರಕರಣಗಳನ್ನು ನಿರ್ವಹಿಸಲಿದ್ದಾರೆ. ಶ್ರೀಯುತ ಆತ್ಮ ವಿ. ಹಿರೇಮಠ ಅವರು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಶಿರಶ್ಯಾಡ ಗ್ರಾಮದವರು ಆಗಿದ್ದಾರೆ ಅವರಿಗೆ ಶ್ರೀ ಎಂ. ಎಸ್. ಮಠ ಅಧ್ಯಕ್ಷರು ಶ್ರೀ ಗುರು ಗಂಗಾಧರೇಶ್ವರ ಸೌಹಾರ್ದ ಪತ್ತಿನ ಸಹಕಾರಿ ನೀ. ಶಿರಶ್ಯಾಡ ಇವರಿಂದ ಅಭಿನಂದನೆಗಳು.ತಿಳಿಸಿರುತ್ತಾರೆ

Leave a Reply