• Wed. Sep 9th, 2026

ಸೂಕ್ತ ಪ್ರತಿಭೆಯನ್ನು ಹೊರ ಹಾಕುವದೇ ಶಿಕ್ಷಣ – ಸ್ವರೂಪಾನಂದ ಶ್ರೀಗಳು

ByAnand

Jun 21, 2026

ಇಂಡಿ ತಾಲೂಕಿನ ಹಿರೇಬೇವನೂರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಪ್ರಸಕ್ತ ವರ್ಷದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು. 

 ಇಂಡಿ

ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರ ಹಾಕುವದೇ ಶಿಕ್ಷಣ, ಸೂಕ್ತ ಪ್ರತಿಭೆಯನ್ನು ಹಾಕಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ದೊರಕಿಸಿಕೊಟ್ಟಾಗ ಮಾತ್ರ ಸಾಧ್ಯ ಎಂದು ಇಂಡಿ ನಗರದ ಓಂ ಕಾರ ಆಶ್ರಮದ ಶ್ರೀ ಸಿದ್ದಾರೂಢ ಮಠದ ಡಾ. ಸ್ವರೂಪಾನಂದ ಶ್ರೀಗಳು ಹೇಳಿದರು.

ತಾಲೂಕಿನ ಹಿರೇಬೇವನೂರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೂಗಾರ ವಸ್ತಿ ಶಾಲೆ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಹಮ್ಮಿಕೊಂಡ ಪ್ರಸಕ್ತ ವರ್ಷದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ನಿವೃತ್ತ ಶಿಕ್ಷಕರಾದ ಆರ್.ವಿ.ಪಾಟೀಲ,ಎಸ್.ಜಿ. ಬಿರಾದಾರ,ಹಾಗೂ ಕೆ.ಜಿ.ನಾಟಿಕಾರ ಶಿಕ್ಷಕರು ತಮ್ಮ ಸೇವಾ ಅನುಭವವನ್ನು ಹಂಚಿಕೊಳ್ಳುತ್ತಾ ಹಿರೇಬೇವನೂರ ಗ್ರಾಮದ ಸರಕಾರಿ ಶಾಲೆಯಲ್ಲಿ ಈ ಹಿಂದೆ ಕಲಿತು ಉದ್ಯೋಗ ಮಾಡುತ್ತಿರುವ ಹಾಗೂ ನಿವೃತ್ತ ನೌಕರರನ್ನು ಒಂದು ಗೂಡಿಸಿ ಸಂಘ ರಚಿಸಿ ಶಾಲಾಭಿವೃದ್ದಿ ಸಲುವಾಗಿ ಶ್ರಮಿಸುವದು ಶ್ರೇಷ್ಠಕಾರ್ಯ ಎಂದರು.

ವಸತಿಯ ಹಿರಿಯರಾದ ಗುರಣ್ಣ ಪವಾಡಿ, ಬಿ.ಎಸ್.ಬಿರಾದಾರ ಗಿರಿಮಲ್ಲ ಬಿರಾದಾರ ಉದ್ಘಾಟಿಸಿದರು.ಬಿ.ಎಂ.ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಗುರುಗಳಾಗಿ ಹಾಗೂ ಗೃಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಸ್.ಜಿ. ಬಿರಾದಾರ, ಆರ್.ವಿ.ಪಾಟೀಲ, ಕೆ.ಜಿ.ನಾಟಿಕಾರ, ಎ.ಎಲ್ ಬೇನೂರ, ಬಸಮ್ಮ ಭಾಸಗಿ, ಗಿರಿಜಾ ಮಲಘಾಣ, ಬೆಬಿ ಶೇಖ್ ಇವರನ್ನು ಸನ್ಮಾನಿಸಲಾಯಿತು.

ಸಾತಪ್ಪ ಪವಾಡಿ, ಗಿರಿಗೌಡ ಬಿರಾದಾರ, ಸೋಮು ಪಾತಾಳಿ, ರಾಜು ಪಾತಾಳಿ, ವಿ.ಬಿ.ನರಳಿ, ಮುಖ್ಯ ಗುರು ಯು ಎಚ್ ಚವ್ಹಾಣ ಪಿ.ಜಿ.ರಾಠೋಡ, ಜೆ.ಎಸ್.ಧನಗೊಂಡ ಭಜಂತ್ರಿ, ಎಸ್.ಎಸ್. ಅಂದೆವಾಡಿ ಮತ್ತಿತರಿದ್ದರು.

By Anand

ಸಿಂಧೂರ ಸಾಮ್ರಾಜ್ಯ 24x7 ನ್ಯೂಸ್

Leave a Reply

Your email address will not be published. Required fields are marked *