• Wed. Sep 9th, 2026

ಮೊಹರಂ ; ಸ್ವಚ್ಛತೆ ಕುಡಿಯುವ ನೀರು ವ್ಯವಸ್ಥೆ ಎಸಿ ನಗರಾಯುಕ್ತರ ಭೇಟಿ

ByAnand

Jun 21, 2026

ಇಂಡಿಯ ಹುಸೇನ ಬಾಷಾ ದರ್ಗಾಕ್ಕೆ ಮೊಹರಂ ನಿಮಿತ್ಯ ಎಸಿ ಚಿದಾನಂದ ಗುರುಸ್ವಾಮಿ ಭೇಟಿ ನೀಡಿ ಸ್ವಚ್ಚತೆ ಪರಿಶೀಲಿಸಿದರು.

ಇಂಡಿನಗರದಲ್ಲಿ ಬುಧವಾರ ಜು ೨೪ ರಂದು ನಡೆಯಲಿರುವ ಮೊಹರಂ ಪ್ರಸಿದ್ದ ಆಟವಿ ಖತಾಲ ಮತ್ತು ಗುರುವಾರ ೨೫ ರಂದು ನಡೆಯುವ ದೇವರ ಮೆರವಣೆಗೆ ಕುರಿತು ಇಂದು ಹುಸೇನ ಬಾಷಾ ದೇವಸ್ಥಾನಕ್ಕೆ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಮೂರ್ತಿ ಮತ್ತು ವಿವಿಧ ಅಧಿಕಾರಿಗಳು ಭೇಟಿ ನೀಡಿ ಕುಡಿಯುವ ನೀರು ಮತ್ತು ಸ್ವಚ್ಚತೆ ವಿದ್ಯುತ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.ದೇವಸ್ಥಾನದ ಸುತ್ತ ಮುತ್ತ ಈಗಾಗಲೇ ನಗರಸಭೆಯಿಂದ ಸ್ವಚ್ಚತಾ ಕಾರ್ಯ ಮಾಡುತ್ತಿದ್ದು ಪ್ರತಿದಿನ ಎರಡು ಬಾರಿ ಸ್ವಚ್ಚತಾ ಸಿಬ್ಬಂದಿ ಸ್ವಚ್ಚತಾ ಕಾರ್ಯ ಮಾಡುತ್ತಿದೆ ಎಂದರು.ಅದಲ್ಲದೆ ಬುಧವಾರ ೨೪ ರಂದು ಅಂದಾಜು ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ನಗರಕ್ಕೆ ಹೊರಗಿನಿಂದ ಬರುವ ನಿರೀಕ್ಷೆ ಇದ್ದು ಅವರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಟ್ಯಾಂಕರ ವ್ಯವಸ್ಥೆ ಮಾಡಲಾಗಿದೆ. ಮತ್ತು ಅಲ್ಲಿನ ನಿವಾಸಿಗಳ ಮನೆಯ ನಳ ೨೪ ಗಂಟೆ ಇರುವದು. ಅವರು ಸಹಕರಿಸಲು ನಿವಾಸಿಗಳಿಗೆ ವಿನಂತಿಸಿದರು.ವಿದ್ಯುತ್ ಇಲಾಖೆಯವರಿಗೆ ವಿದ್ಯುತ್ ತೊಂದರೆಯಾಗದಂತೆ ಮತ್ತು ದೇವಸ್ಥಾನದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ವ್ಯವಸ್ಥೆ ಇದ್ದು ಪೋಲಿಸ ಇಲಾಖೆ ಎರಡು ತುಕುಡಿಗಳು ದೇವಸ್ಥಾನದ ಸುತ್ತಲೂ ಶಾಂತಿ ಮತ್ತು ಸುವ್ಯವಸ್ಥೆಗೆ ಇರುವರು ಎಂದರು.ನಗರಸಭೆ ಆಯುಕ್ತ ಶಿವಾನಂದ ಪೂಜಾರಿ, ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಸಿ.ಪಿ.ಐ ಪ್ರದೀಪ ಬಿಸೆ, ನಗರಸಭೆಯ ಸಂಗೀತಾ ಕೋಳಿ, ಹುಚ್ಚಪ್ಪ ಶಿವಶರಣ ಮತ್ತು ದೇವಸ್ಥಾನದ ಸಮಿತಿಯ ಸದಸ್ಯರು ಇದ್ದರು.

By Anand

ಸಿಂಧೂರ ಸಾಮ್ರಾಜ್ಯ 24x7 ನ್ಯೂಸ್

Leave a Reply

Your email address will not be published. Required fields are marked *