
ಇಂಡಿ ಮತಕ್ಷೇತ್ರದ ಯಶವಂತರಾಯ ಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಲು ದಲಿತ ಸೇನೆ ಸಂಘಟನೆಯಿಂದ ಮನವಿ ವರದಿ. ಆನಂದ. ಅಗರಖೇಡ ಇಂಡಿ ದಲಿತ ಸೇನೆ ಸಂಘಟನೆ ವತಿಯಿಂದ ಡಿ ಕೆ ಶಿವುಕುಮಾರ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ರವರಗೆ ನಮ್ಮ ಇಂಡಿ ತಾಲೂಕಿಗೆ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಒಂದು ಬಾರಿಯು ಕೂಡಾ ಸಚಿವ ಸ್ಥಾನದ ಅವಕಾಶ ಸಿಕ್ಕಿರುವುದಿಲ್ಲ.. ಡಾ.ನಂಜುಡಪ್ಪ ವರದಿ ಪ್ರಕಾರ ನಮ್ಮ ತಾಲೂಕು ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಆರ್ಥಿಕವಾಗಿ, ಸಾಮಾಜಿಕ, ಧಾರ್ಮಿಕವಾಗಿ ಮತ್ತು ಶೈಕ್ಷಣಿಕವಾಗಿ ನಮ್ಮ ಮತಕ್ಷೇತ್ರ ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಬೇಕಾದರೇ ಈ ಬಾರಿ ನಮ್ಮ ಮತಕ್ಷೇತ್ರದ ಹೆಮ್ಮೆಯ ಜನನಾಯಕರು,
ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗಳು, ದಿನ ದಲಿತರ, ಬಡವರ ಬಾಳಿಗೆ ಬೆಳಕಾದ ಧೀಮಂತ ನಾಯಕರು ಅಷ್ಟೇ ಅಲ್ಲದೇ ಇವರು ಕಾಂಗ್ರೇಸ್ ಪಕ್ಷವನ್ನು ನಮ್ಮ ತಾಲೂಕಿನಲ್ಲಿ ಬೇರು ಮಟ್ಟದಿಂದ ಸಂಘಟಿಸಿ ಜಿಲ್ಲೆಯಲ್ಲಿಯೇ ಒಂದು ದೊಡ್ಡ ಶಕ್ತಿಯನ್ನಾಗಿ ಮಾಡಿದ್ದಾರೆ.ಸತತ ಇವರು ಮೂರು ಬಾರಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಹ್ಯಾಟ್ರಿಕ ಸಾಧನೆ ಮಾಡಿರುವ ಜನಸೇವಕ ಇವರು ಕೇವಲ ಒಬ್ಬ ಶಾಸಕರಾಗಿ ನಮ್ಮ ಕ್ಷೇತ್ರದಲ್ಲಿ ಸತತ ಬರಗಾಲಿನಿಂದ ಕಂಗೆಟ್ಟ ನಮ್ಮ ತಾಲೂಕಿನಲ್ಲಿ ನೂರಾರು ಕೆರೆಗಳಿಗೆ ಬೇಸಿಗೆ ಸಮಯದಲ್ಲಿ ನೀರು ತುಂಬಿಸಿ, ಉತ್ತರ ಕರ್ನಾಟಕದ ಜೀವನಾಡಿಯಾದ ನಮ್ಮ ಭೀಮಾ ನದಿಗೆ ನೀರು ಹರಿಸಿ ರೈತರ ಬಾಳಿನಲ್ಲಿ ಬೆಳಕು ಮೂಡಿಸಿ,
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಂಬೆ ಬೆಳೆಗೆ “ಜಿಐ ಟ್ಯಾಗ್’ ಸಿಗುವಂತೆ ಮಾಡಿ ನಿಂಬೆ ಬೆಳೆ ಬೆಳೆಯುವ ರೈತರ ಬಾಳಿಗೆ ಬೆಳಕಾದ ನಿಂಬೆ ನಾಡಿನ ದೃವತಾರೆ..! ಇವರು ಇತ್ತಿಚಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳು ಮಾಡಿದ್ದಾರೆ. ಇಂತಹ ಜನಪರ ನಾಯಕನಿಗೆ ಈ ಬಾರಿ ತಾವು ತಮ್ಮ ಸಂಪುಟದಲ್ಲಿ ಸಚಿವ ಸ್ಥಾನ ನೀಡಲೇಬೇಕೆಂದು ದಲಿತ ಸೇನೆ ಜಿಲ್ಲಾ ಅಧ್ಯಕ್ಷ ಖಾಜು. ಎಲ್. ಹೊಸಮನಿ ರವರು ತಾಲೂಕಿನ ತಹಸಿಲ್ದಾರ್ ಕಚೇರಿಯ ಚಿರಸ್ತೇದಾರ ಶ್ರೀಕಾಂತ ಪೂಜಾರಿ ಯವರಿಗೆ ಮನಿವಿ ಪತ್ರ ಸಲ್ಲಿಸಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ವಿನೋದ. ಬನಸೋಡೆ ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷರು ಇಂಡಿ ಭಾಗದ ಜನರ, ಮಹಿಳೆಯರ ವಿದ್ಯಾರ್ಥಿಗಳಸೇನೆ. ದಯವಿಟ್ಟು ಇಂತಹ ಬದ್ಧತೆಯ ನಾಯಕನಿಗೆ ಅನ್ಯಾವಾಗಲು ಹಾಗೂ ಬೀಡುವುದಿಲ್ಲವೆಂಬ ಆಶಾಭಾವ ನಮ್ಮದು.ಯಂದು ಹೇಳಿದರು
ಮಾನ್ಯ ಮುಖ್ಯ ಮಂತ್ರಿಗಳು ನಮ್ಮ ಇಂಡಿ ಭಾಗಕ್ಕೆ ಸಚಿವ ಸ್ಥಾನ ನೆಡಲೇಬೇಕು ಇಲ್ಲ ವಾದಲ್ಲಿ ಮುಂದಿನ ದಿನಮಾನಗಳಲ್ಲಿ ದಲಿತ ಸೇನೆ ಸಂಘಟನೆಯಿಂದ ರಸ್ತೆ ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ ನಾಗರಾಜ್. ಲೋಣಿಕರ್, ಸತೀಶ್. ಬಿ. ಬನಸೋಡೆ, ರಾಮಚಂದ್ರ ಬಿ ಬನಸೋಡೆ, ರವಿ. ದೊಡ್ಡಮನಿ, ರಾಹುಲ್ ಗೌಳಿ, ಮಿಥುನ್ ಕೊರವಾರ ಉಪಸ್ಥಿತರಿದ್ದರು
Leave a Reply