ಬಳ್ಳೊಳ್ಳಿ ಗ್ರಾಮದ ನಾಡ ಕಚೇರಿಯಲ್ಲಿ ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಆಚರಣೆ

Written by

in

ಝಳಕಿ : ಹಿರಿಯ ಕೆಂಪೇಗೌಡರು (೧೫೧೦–೧೫೬೯) ಅಥವಾ ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿದ್ದರು, ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ದೂರದೃಷ್ಠಿಯಿಂದ ನಿರ್ಮಿಸಿದ ಬೆಂಗಳೂರು ನಗರ ಇಂದು ಕರ್ನಾಟಕ ರಾಜ್ಯದ ರಾಜಧಾನಿಯಾಗಿದೆ ಎಂದುಕಂದಾಯ ನೀರಿಕ್ಷಕರು ಬಳ್ಳೊಳ್ಳಿ ಪಿ. ಜೆ. ಕೊಡಹೊನ್ನ ಮಾತನಾಡಿದರು.

ಬಳ್ಳೊಳ್ಳಿ ಗ್ರಾಮದ ನಾಡ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಆಚರಣೆ ಸಂಪ್ರದಾಯಕ, ಕಾನೂನಾತ್ಮಕವಾಗಿ ಆಚರಣೆಮಾಡಲಾಯಿತು. ನಮ್ಮ ದೇಶದ, ರಾಜ್ಯದ ವಳಿತಿಗಾಗಿ ಹೋರಾಡಿದ ಹಲವಾರು ಗಣ್ಯರ ಆಚರಣೆಗಳು ನಾವು ಮಾಡುತ್ತೇವೆ, ಆದರೆ ಅವರ ತತ್ವ, ಆದರ್ಶ್ ಪಾಲಿಸಲು ಹಿಂದೇಟು ಹಾಕುವದು ಯಾಕೆ?, ನಾವುಗಳು ನಮ್ಮ ಯುವ ಪೀಳಿಗೆಗೆ ನಮ್ಮ ಹಿರಿಯರ ಆದರ್ಶಗಳನ್ನು ಪಾಲಿಸುವಂತೆ ಕಳಿಸೋದು ನಮ್ಮ ಆದ್ಯ ಕರ್ತವ್ಯ, ಇವತ್ತು ಎಲ್ಲೆಂದರಲ್ಲಿ ಕೊಲೆ, ಸುಲಿಗೆ, ದರೋಡೆ, ಅಸೂಹೆತನ, ಇದಕ್ಕೆಲ್ಲ ಕಾರಣ ನಮ್ಮಲ್ಲಿರುವ ಸಂಸ್ಕಾರದ ಕೊರತೆ, ಇದನ್ನು ಹೋಗಲಾಡಿಸಿದಾಗ ಮತ್ತೆ ಹಳೆಯ ದಿನಗಳನ್ನು ಕಾಣಲು ಸಾಧ್ಯ, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಾವುಗಳು ಸಂಕಷ್ಟಕ್ಕೆ ಸಿಲುಕೋದು ಸಹಜ ಎಂದರು. ಈ ಸಮಯದಲ್ಲಿ ಕಂಪ್ಯೂಟರ್ ಆಪರೇಟರ ಮಂಜುನಾಥ್ ಬನಸೋಡೆ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *