ಗಾಣದೇವತೆ ಉತ್ಸವ ಮುಂದುವರಿಸಿಕೊಂಡು ಹೋಗುವುದು ಅವಶ್ಯಕವಾಗಿದೆ -ನ್ಯಾಯವಾದಿ ಶ್ರೀಶೈಲ ಸಜ್ಜನ

Written by

in

ವಿಜಯಪುರ : ಗಾಣದೇವತಾ ಉತ್ಸವ ಸಮಿತಿ ಹಾಗೂ ವಿಜಯಪುರ ಜಿಲ್ಲಾ ಗಾಣಿಗ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಗರದ ವನಶ್ರೀ ಮಠದ ಆವರಣದಲ್ಲಿ ಹಮ್ಮಿಕೊಡಿದ್ದ ಗಾಣದೇವತಾ ಉತ್ಸವದಲ್ಲಿ ನಾಡಿಗೆ ಮಳೆ ಬೆಳೆ ಬರಲಿ, ವಿದೇಶಗಳಲ್ಲಿರುವವರು ಸುರಕ್ಷಿತವಾಗಿ ತಾಯಿ ನಾಡಿಗೆ ಮರಳಲಿ ಎಂದು, ಸಮಾಜ ಬಂಧುಗಳಿಗೆ ಒಳಿತನ್ನುಂಟು ಮಾಡಲಿಯೆಂದು, ಅಥಣಿ ಶಾಸಕರಾದ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ಹಾಗೂ ಧಾರವಾಡ ಕೃಷಿ ವಿ ವಿ ಗೆ ಡಾ ಅಶೋಕ ಸಜ್ಜನ ಅವರಿಗೆ ಉಪಕುಲಪತಿ ಹುದ್ದೆ ದೊರೆಯಲಿ ಎಂದು ಗಾಣದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಚಾಲಕರಾದ ನ್ಯಾಯವಾದಿ ಶಿಶೈಲ ಸಜ್ಜನ ಅವರು ಮಾತನಾಡಿ ಗ್ರಾಮದೇವತೆ ಗ್ರಾಮಕ್ಕೆ ಒಳಿತನ್ನುಂಟು ಮಾಡಿದರೆ ಗಾಣದೇವತೆ ತನ್ನ ಒಡಲೊಳಗಿನ ಎಣ್ಣೆಯನ್ನು ಧಾರೆಯೆರೆದು ಬೆಳಕು ನೀಡಿ ಲೋಕಕ್ಕೆ ಒಳಿತನ್ನುಂಟು ಮಾಡುತ್ತಾಳೆ ಎಂದು ಹೇಳಿದರು.

ಗಾಣದೇವತೆಗೆ ಪುರಾತನ ಕಾಲದಿಂದ ಪೂಜಿಸುತ್ತಾ ಬರಲಾಗುತ್ತಿದೆ. ಕಾಲ ಬದಲಾದಂತೆ ಧಾರ್ಮಿಕ ಆಚರಣೆಗಳಿಂದ ಜನ ದೂರ ಸರಿಯುತ್ತಿದ್ದಾರೆ ನಮ್ಮ ಜನಪದ ಆಚರಣೆ,ಧಾರ್ಮಿಕ ಪರಂಪರೆಯಾದ ಗಾಣದೇವತೆ ಉತ್ಸವ ಮುಂದುವರೆಸಿಕೊಂಡು ಹೋಗುವುದು ಇಂದು ಅತ್ಯಂತ ಅವಶ್ಯಕವಾಗಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಶಿವಣಗಿಯ ಗುರುದೇವಾಶ್ರಮದ ಶಿವಲಿಂಗ ಸ್ವಾಮಿಗಳು ಧರ್ಮ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಗಾಣದೇವತೆಯನ್ನು ಪೂಜಿಸುವವರು ಸದಾ ಕಾಲ ದೇವತೆಯ ಕೃಪೆಯಿಂದ ಬೆಳಕಿನಲ್ಲಿ ಇರುತ್ತಾರೆ,ಸಮಾಜದ ಪ್ರತಿಯೊಬ್ಬರು ಲಿಂಗ ದೀಕ್ಷೆ ಪಡೆದುಕೊಂಡು ತತ್ವನಿಷ್ಟ ಜೀವನ ಸಾಗಿಸಬೇಕು ಎಂದು ಹೇಳಿದ ಅವರು ಗಾಣದೇವತೆ ಉತ್ಸವ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದರು.

ಕಾರ್ಯಕ್ರಮದಲ್ಲಿ ವನಶ್ರೀ ಸಂಸ್ಥಾನ ಮಠದ ಲಿಂಗೈಕ್ಯ ಜಯದೇವ ಜಗದ್ಗುರುಗಳ ಪ್ರಣವವ ಮಂಟಪಕ್ಕೆ ಪೂಜೆ ಸಲ್ಲಿಸಿ ಪಂಚಾಕ್ಷರಿ ಮಂತ್ರ ಪಠಣ ಮಾಡಿ ಸಹಸ್ರ ಬಿಲ್ವಾರ್ಚನೆಗೈಯ್ಯಲಾಯಿತು.

ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾ ಪಂಚಾಯತ ಎದುರಿಗೆ ಇರುವ ವನಶ್ರೀ ವೃತ್ತದಿಂದ ಕಾರ್ಯಕ್ರಮದ ವೇದಿಕೆಯವರೆಗೆ ಗಾಣದೇವತೆ ಮೆರವಣಿಗೆ ಮೆರವಣಿಗೆ ನಡೆಯಿತು.

 ಇದೇ ಸಂದರ್ಭದಲ್ಲಿ 101 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಕೊನೆಯಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಗಾಣಿಗ ಸಮಾಜದ ಅಧ್ಯಕ್ಷ ಬಿ ಕೆ ಪಾಸೋಡಿ ಮುಖಂಡರಾದ ಶರಣಪ್ಪ ಶಹಾಪೇಟಿ, ಮಲ್ಲಿಕಾರ್ಜುನ ಲೋಣಿ, ನ್ಯಾಯವಾದಿ ಶ್ರೀಕಾಂತ ಶಿರಾಡೋಣ, ಈರಣ್ಣ ಬಿಷ್ಟಗೊಂಡ,ಶ್ರೀಶೈಲ ಗಡಗಿ, ಗುರುಸಿದ್ದಪ್ಪ ಸಜ್ಜನ,ಗುರುರಾಜ ಸಜ್ಜನ ಇಂಗಳಗಿ , ಬಸು ಹಳ್ಳಿ, ರಾಜಶೇಖರ ಸಜ್ಜನ ಡೋಣೂರ, ಶರಣು ಸಜ್ಜನ,ನ್ಯಾಯವಾದಿ ಬಸವರಾಜ ಸಜ್ಜನ,ವಿಜಯಕುಮಾರ ಶಿರಶ್ಯಾಡ ಸೇರಿದಂತೆ ವಿವಿಧ ಗಣ್ಯರು ಗಾಣಿಗ ಸಮಾಜದ ಮುಖಂಡರು ಉಪಸ್ಥಿತರಿದ್ದರು

Comments

Leave a Reply

Your email address will not be published. Required fields are marked *