ಸನ್ಸೂರ ಸೋಲಾರ ಪಾರ್ಕ ಪಾರ್ಟಿಸೆವೆನ್ ಪ್ರೈವೇಟ್ ಲಿಮಿಟೆಡ್ (ವಿಂಡಪ್ಯಾನ್) ಕಂಪನಿಯಿಂದ ರೈತರಿಗೆ ಆಗಿರುವ ಮೋಸದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ

Written by

in

ವಿಜಯಪುರ : ದೇವರಹಿಪ್ಪರಗಿತಾಲೂಕಿನ ಕೋರವಾರ ಗ್ರಾಮದಲ್ಲಿಸನ್ಸೂರ ಸೋಲಾರ ಪಾರ್ಕ ಪಾರ್ಟಿಸೆವೆನ್ ಪ್ರೈವೇಟ್ ಲಿಮಿಟೆಡ್ (ವಿಂಡಪ್ಯಾನ್) ಕಂಪನಿಯಿಂದ ರೈತರಿಗೆ ಆಗಿರುವ ಮೋಸದ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಂಡು ಹಾಗೂ ರೈತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ ಅವರಿಗೆ ಮನವಿ ಸಲ್ಲಿಸಿದರು.ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನಕೋರವಾರ ಗ್ರಾಮದಲ್ಲಿ ಸನ್ಸೂರ ಸೋಲಾರ ಪಾರ್ಕ ಪಾರ್ಟಿಸೆವೆನ್ ಪ್ರೆöÊವಿಟ್ಲಿಮಿಟೆಡ (ವಿಂಡಪ್ಯಾನ್) ಕಂಪನಿಯಿAದ ಸುಮಾರು ೧೦ ವಿಂಡ್ ಪ್ಯಾನ್‌ಗಳನ್ನುಅಳವಡಿಸಿದ್ದು, ಅದರಲ್ಲಿ ಒಂದು ಎಕರೆ ಖರೀಧಿ ಹಾಗೂ ಉಳಿದಂತೆ ೬-೭ ಎಕರೆ ೨೯ವರ್ಷ ೧೧ ತಿಂಗಳಿಗೆ ಬಾಡಿಗೆ ತೆಗೆದುಕೊಳ್ಳುತ್ತೆನೆಂದು ಕರಾರುಮಾಡಿಕೊಳ್ಳುವುದಾಗಿ ಮುಗ್ದ ರೈತರಿಗೆ ಮಧುವರ್ತಿಗಳ ಮೂಲಕಒಪ್ಪಿಸಿದ್ದಾರೆ.ಆದರೆ ಬಾಡಿಗೆ ತೆಗೆದುಕೊಳ್ಳುವುದಾಗಿ ಹೇಳಿ ಪವರ್ ಆಫ್ ಅಟಾರ್ನಿಪತ್ರಗಳಿಗೆ ಬಸವನ ಬಾಗೇವಾಡಿ ಉಪನೋಂದಣಿ ಕಚೇರಿಯಲ್ಲಿ ಸಹಿಹಾಕಿಸಿಕೊಂಡಿದ್ದಾರೆ, ಇಲ್ಲಿ ಇಂಗ್ಲಿಷನಲ್ಲಿ ಇರುವ ನೂರಾರು ದಾಖಲಾತಿಗಳಿಗೆ ಸಹಿಮಾಡಿಸಿಕೊಂಡಿರುವ ವಿಂಡ್ ಪ್ಯಾನ್ ಕಂಪನಿಯವರು ಬಾಡಿಗೆತೆಗೆದುಕೊಳ್ಳುತ್ತೆನೆ ಎಂದು ಹೇಳಿರುವ ಭೂಮಿಗಳನ್ನು ಕೈಗಾರಿಕೆಅಥವಾ ಕೃಷಿಯೇತ್ತರ ಉದ್ದೇಶಕ್ಕಾಗಿ ಬಿನ್ ಶೆತ್ಕಿ ಪತ್ರ ಲಗುತ್ತಿಸಿ ಭೂಪರಿವರ್ತನೆ (ಎನ್.ಎ) ಮಾಡಿಕೊಳ್ಳುತ್ತಿರುವುದಾಘಿ ತಿಳಿದು ಬಂದಿದೆ.ಇದರಿAದ ರೈತರಿಗೆ ಸರಕಾರದ ಯಾವುದೇಯೋಜನೆಗಳನ್ನು ತೆಗೆದುಕೊಳ್ಳಲು ಬರುವುದಿಲ್ಲ ಜೊತೆಗೆ ಯಾವುದೇಸಾಲ ಪಡೆಯಲು ಕೂಡಾ ಬರುವುದಿಲ್ಲ. ವಿಂಡ್ ಪ್ಯಾನ್ ಕಂಪನಿಯವರು ಬಾಡಿಗೆಪಡೆದ ಭೂಮಿ ಮೇಲೆ (ಎನ್.ಎ) ಆಗಿದೆ ಎಂದು ಸರಕಾರಿ ಅಥವಾ ಖಾಸಗಿ ಬ್ಯಾಂಕಅಥವಾ ಹೊರಗಡೆ ಸಾಲ ತೆಗೆದುಕೊಂಡು ತುಂಬದಿದ್ದರೆ ಅಥವಾ ಕಂಪನಿದೀವಾಳಿಯಾದರೆ ರೈತರು ಬೀದಿಗೆ ಬರಬೇಕಾಗುತ್ತದೆ, ಕೂಡಲೇ ಸದರಿಜಮೀನುಗಳ ಮೇಲೆ ಪಡೆದುಕೊಂಡಿರುವ ಕೊಟ್ಟಿ ಪವರ್ ಆಫ್ಅಟಾರ್ನಿಯನ್ನು ರದ್ದು ಪಡೆಸಬೇಕು, ಮುಂದೆಯೂ ಕೂಡಾ ಯಾವರೈತರಿಗೂ ಈ ರೀತಿ ಅನ್ಯಾಯ ವಾಗಬಾರದು ಎಂದು ಈ ಮೂಲಕ ವಿನಂತಿಪೂರ್ವಕವಾಗಿ ಕೇಳಿಕೊಳ್ಳುತ್ತೆವೆ ಎಂದರು.ಇಲ್ಲವಾದಲ್ಲಿ ಮೋಸಹೋದ ರೈತರೊಂದಿಗೆ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹೋರಾಟ ಮಾಡಲಾಗುವುದುಇದರ ಜೊತೆಗೆ ಉಚ್ಚ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿ ನ್ಯಾಯಸಿಗುವವರೆಗೂ ಆ ಪ್ಯಾನ್‌ಗಳನ್ನು ಪ್ರಾರಂಭಿಸಬಾರದು ಎಂದು ಈ ಮೂಲಕಒತ್ತಾಯಿಸುತ್ತೆವೆ ಎಂದರು.ಅದೇರೀತಿ ಸರ್ಕಾರದ ಮಾಗ್ಸೂಚಿಯನ್ನು ಗಾಳಿಗೆ ತೂರಿ,ಸಂಬಂಧಿಸಿದ ಹಲವಾರು ಇಲಾಖೆಗಳ ಅನುಮತಿ ಪಡೆಯಬೇಕಿರುವ ಇವರು ದಾಬ್ಬಾಳಿಕೆ ಮಾಡಿ ಮುನ್ನುಗುತ್ತಿದ್ದಾರೆ, ಸರ್ಕಾರಕ್ಕೆಕಟ್ಟಬೇಕಿರುವ ತೆರಿಗೆ ಸಹ ಕಟ್ಟುತಿಲ್ಲ, ಇದನ್ನು ಕೂಡಾ ಜಿಲ್ಲಾಧಿಕಾರಿಗಳುಗಮನ ಹರೆಸಬೇಕು ಮತ್ತು ಜಿಲ್ಲೆಯಲ್ಲಿ ೩೩% ಪ್ರತಿಶತ ಇರಬೇಕಿರುವಅರಣ್ಯ ಕೇವಲ ೨ % ಇದೆ, ಇದನ್ನು ಗಮನದಲ್ಲಿಕೊಂಡು ಯಾವುದೇ ವಿಂಡಹಾಗೂ ಸೋಲಾರ ಘಟಕಗಳಲಿಗೆ ಅನುಮತಿ ನೀಡಬಾರದು ಎಂದು ಈಮೂಲಕ ಮನವಿ ಮಾಡಿಕೊಳ್ಳುತ್ತೆವೆ ಎಂದರು.ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ, ರಾಜ್ಯಉಪಾಧ್ಯಕ್ಷರಾದ ಕಲ್ಲು ಸೋನ್ನದ, ದೇವರ ಹಿಪ್ಪರಗಿ ತಾಲೂಕಾಅಧ್ಯಕ್ಷರಾದ ಈರಪ್ಪ ಕುಳೆಕುಮಟಗಿ, ದೇವರ ಹಿಪ್ಪರಗಿ ತಾಗೌರವಾಧ್ಯಕ್ಷರಾದ ಶಿವಾನಂದಯ್ಯ ಹಿರೇಮಠ, ಬಾಗೇವಾಡಿ ತಾ ಅಧ್ಯಕ್ಷರಾದಮುದಕಣ್ಣ ಹೋರ್ತಿ, ಮಲ್ಲನಗೌಡ ಬಿರಾದಾರ, ಮಲ್ಲನಗೌಡಛಾಯಾಗೋಳ, ಮಹಾಂತಗೌಡ ಪಾಟೀಲ, ಬಾಬು ಘೋರಪಡೆ, ಬೀಮನಗೌಡಪಾಟೀಲ, ಸೋಮಶೇಖರ ತಾಳಿಕೋಟಿ , ಭೀಮರಾಯ ಜಾಧವ ಸೇರಿದಂತೆಇತರ ರೈತರು ಇದ್ದರು,

Comments

Leave a Reply

Your email address will not be published. Required fields are marked *