• Wed. Sep 9th, 2026

ಅಗ್ನಿವೀರ ಆಯ್ಕೆಯಾದ ಯೋಧರಿಗೆ ಸನ್ಮಾನ

ByAnand

Jun 26, 2026

ಹಾಲುಮತ ಸಮಾಜದ ಅಧ್ಯಕ್ಷ ಜಟ್ಟೆಪ್ಪ ರವಳಿ ಅವರು ಗಡಿ ಕಾಯುವ ಅಗ್ನಿವೀರ ಹುದ್ದೆಗೆ ಆಯ್ಕೆಯಾದ ಯುವಕರಿಗೆ ನಿಂಗರಾಯ ದೇವಸ್ಥಾನದ ಆವರಣದಲ್ಲಿ ಸನ್ಮಾನಿಸಿ ಗೌರವಿಸಿದರು. ಇಂಡಿ ಗಡಿಯಲ್ಲಿ ನಮ್ಮ ಯೋಧರು ಹಗಲು-ರಾತ್ರಿಯನ್ನದೇ ರಕ್ಷಣೆ ಮಾಡುತ್ತಿರುವುದರಿಂದ ನಾವೆಲ್ಲ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ.

ದೇಶ ಸೇವೆ ಮಾಡೋದು ಪವಿತ್ರವಾದ ಕಾರ್ಯ ಎಂದು ತಾಲೂಕಾ ಹಾಲುಮತ ಸಮಾಜದ ಅಧ್ಯಕ್ಷ ಜಟ್ಟೆಪ್ಪ ರವಳಿ ಹೇಳಿದರು. ಪಟ್ಟಣದ ನಿಂಗರಾಯ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡ ಗಡಿ ಕಾಯುವ ಅಗ್ನಿವೀರ ಹುದ್ದೆಗೆ ಆಯ್ಕೆಯಾದ ಯುವಕರಿಗೆ ಸನ್ಮಾನಿಸಿ ಮಾತನಾಡಿದರು.

ಇಂದು ಯುವಕರು ದೇಶ ಪ್ರೇಮ ಬೆಳೆಸಿಕೊಂಡು ದೇಶ ಕಾಪಾಡುವದು ಯುವಕರ ಕೈಯಲ್ಲಿದೆ. ಯುವಕರು ದೇಶಕ್ಕಾಗಿ ಯಾವ ಪ್ರಾಣಕ್ಕೂ ಸಿದ್ದರಾಗಬೇಕೆಂದರು. ಪತ್ರಕರ್ತ ಲಕ್ಷ್ಮಣ ಕುರುಬರ ಮಾತನಾಡಿ ಒಬ್ಬ ರೈತ ಹಾಗೂ ಒಬ್ಬ ಸೈನಿಕ ಈ ದೇಶಕ್ಕೆ ದೊಡ್ಡ ಶಕ್ತಿ ಇವರಿಬ್ಬರ ನಿಸ್ವಾರ್ಥ ಸೇವೆಯಿಂದ ನಾವೆಲ್ಲ ಸಮೃದ್ಧಿ ಜೀವನ ನಡೆಸಲು ಸಾಧ್ಯವಾಗಿದೆ ತಾವುಗಳು ನಿಷ್ಠೆಯಿಂದ ದೇಶಕ್ಕಾಗಿ ದುಡಿಯಬೇಕು ಎಂದು ಯೋಧರಿಗೆ ಕರೆ ನೀಡಿದರು.ಲಕ್ಕು ಯಳಮೇಲಿ, ರೀಯಾಜ ಭಾಗವಾನ, ಬೀಮು ಪೂಜಾರಿ, ಹಣಮಂತ ಗುಡ್ಲ, ಪರಸುರಾಮ ಪೂಜಾರಿ, ಕೆಂಚಪ್ಪ ಬಂಗಾರಿ, ಸಿದ್ದಪ್ಪ ಬಂಗಾರಿ ಮತ್ತಿತರಿದ್ದರು.

By Anand

ಸಿಂಧೂರ ಸಾಮ್ರಾಜ್ಯ 24x7 ನ್ಯೂಸ್

Leave a Reply

Your email address will not be published. Required fields are marked *