• Wed. Sep 9th, 2026

ಬಂಥನಾಳ ಲಚ್ಯಾಣದ ನೂತನ ಪೀಠಾಧಿಪತಿ ಸಂಗನಬಸವ ಶ್ರೀಗಳಿಂದ ಪೀಠಾಧಿಕಾರ

ByAnand

Aug 13, 2026

ಶ್ರೀ ಸಂಗನಬಸವ ಶ್ರೀಗಳು 

 ಇಂಡಿ

ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸುಕ್ಷೇತ್ರ ಬಂಥನಾಳ ಲಚ್ಯಾಣವು ಜನರನ್ನು ಅಜ್ಞಾನ ಹಾಗೂ ಬಡತನಗಳಿಂದ ಮುಕ್ತ ಮಾಡಿದ ಮುಕ್ತಿ ಮಂದಿರ. ಶ್ರೀ ಮಠದ ಪರಂಪರೆಯು ಭವ್ಯವಾಗಿದೆ. ಸದಾ ಸ್ಮರಣೀಯವಾಗಿದೆ.

ದಂಪತಿಗಳಾದ ಶರಣಬಸವ ಮತ್ತು ನೀಲಾಂಬಿಕಾ ಪುತ್ರ ದೇಶ ಸಂಚಾರ ಮಾಡುತ್ತ ಬಂಥನಾಳಕ್ಕೆ ಬಂದರು.ಅವರ ನಡೆ ನುಡಿ ಜನ ಭಕ್ತಿಯಿಂದ ಪೂಜಿಸಿ ಪುನೀತರಾದರು.ಅವರಿಗೆ ಬಂಥನಾಳದಲ್ಲಿ ಮಠವನ್ನು ಕಟ್ಟಿ ಅವರಿಗೆ ವೃಷಭಲಿಂಗರೆಂದು ನಾಮಕರಣ ಮಾಡಿದರು.

ವೃಷಭಲಿಂಗರ ಸ್ಥಾಪನೆಗೊಂಡ ಶ್ರೀ ಮಠದ ಎರಡನೆಯ ಪೀಠಾಧಿಪತಿಗಳಾಗಿ ಶ್ರೀ ಶಂಕರಲಿಂಗರು ಬಂದರು. ಶ್ರೀ ಶಂಕರಲಿಂಗರು ಬಂಥನಾಳ ಜ್ಞಾನ ಪೀಠದ ಬುನಾದಿಗಾಗಿ ಮಠ ಕಟ್ಟುವ ಕಾರ್ಯ ಮಾಡಿದರು.

  ಈ ನಾಡಿನಲ್ಲಿ ಹೆಸರಾದ ಪವಾಡ ಸಿದ್ದಿ ಪುರುಷ ಶ್ರೀ ಸಿದ್ದಲಿಂಗ ಮಹಾರಾಜರಂತಹ ಶಿಷ್ಯರನ್ನು ಈ ನಾಡಿಗೆ ನೀಡಿದರು. ಶ್ರೀ ಪೀಠಧ ಮೂರನೆಯ ಪೀಠಾಧಿಕಾರಿಗಳಾದ ದಯಮಾಡಿಸಿದ ಸಿದ್ದಲಿಂಗರ ಜೀವಿತ ಅವಧಿ ಕಡಿಮೆ ಇದ್ದರೂ ಸಾದನೆ ಮಾಡಿ ಭಕ್ತರ ಕುಲಕೋಟಿಯನ್ನು ಹೃದಯದಲ್ಲಿ ಮನ ಮಾಡಿಕೊಂಡರು. 

ವಿಜಯಪುರ ಜಿಲ್ಲೆಯ ಅಜ್ಞಾನ ಅಂಧಕಾರ ಬಡತನಗಳೆಂಬ ಭುತಗಳನ್ನು ಹೊಡೆದೊಡಿಸಿ ಜ್ಞಾನ ಕ್ರಾಂತಿಗೈಯ್ಯಲು ಬಂದವರು ಬಂಥನಾಳದ ಸಂಗನಬಸವ ಶ್ರೀಗಳು. ಬಂಥನಾಳ ಪೀಠದ ನಾಲ್ಕನೆಯ ಪೀಠಾಧಿಕಾರಿಗಳಾದ ಶ್ರೀ ಸಂಗನಬಸವರು ಲಿಂಗ ಪೂಜೆಗಿಂತ ಜನಸೇವೆಗೆ ಆಧ್ಯತೆ ನೀಡಿದ ಪೂಜ್ಯರು ವಚನ ಪಿತಾಮಹ ಫ.ಗು.ಹಳಕಟ್ಟಿ ಕರ್ನಾಟಕದ ಗಾಂಧಿ ಹರ್ಡೆಕರ ಮಂಜಪ್ಪ ನವರನ್ನು ಶ್ರೀ ಮಠಕ್ಕೆ ದಯಮಾಡಿಸಿ ವೈಚಾರಿಕ ಕ್ರಾಂತಿಯ ಕಹಳೆ ಊದಿದರು.

ವಿಜಯಪುರ ನಾಡಿನಲ್ಲಿ ಪುರಾಣ ಪ್ರವಚನದಿಂದ ಬಂದಂತತಹ ದೇಣಿಗೆಗಳನ್ನು ಶ್ರೀ ಮಠಕ್ಕೆ ತರದೇ ಆಯಾ ಸ್ಥಳದಲ್ಲಿಯೇ ವಿದ್ಯಾ ಸಂಸ್ಥೆಗಳನ್ನು ಕಟ್ಟಿದರು.

ವಿದ್ಯಾಲಯಗಳೇ ದೇವಾಲಯಗಳು ವಿದ್ಯಾರ್ಥಿಗಳೇ ಜೀವಂತ ದೇವರು ಎಂದು ನಂಬಿದರು.

ಹುನಗುಂದದ ಶರಣ ದಂಪತಿಗಳಾದ ಬಸವಯ್ಯ ಹಾಗೂ ಶರಣಮ್ಮ ತಾಯಿಯ ಅಮೂಲ್ಯ ರತ್ನವೇ ಡಾ. ವೃಷಭಲಿಂಗರು. ಶ್ರೀ ಸಂಗನ ಬಸವರು ಕ್ರಾಂತಿಯ ನೆರಳಲ್ಲಿ ಶಾಂತಿಯುತವಾದಂತಹ ಕ್ರಾಂತಿ ಗೈದು ಪೂಜ್ಯರ ವಿಚಾರಗಳನ್ನು ಜನರಲ್ಲಿ ಬಿತ್ತರಿಸುವ ಶ್ರೀ ಮಠ್ ಹಲವಾರು ಶಾಖಾಮಠಗಳ ಜಾತ್ರೋತ್ಸವಗಳನ್ನುವಿಬೃಂಜಣೆಯಿಂದ ಕಾಲಕ್ಕೆ ತಕ್ಕ ವಿಚಾರಗಳನ್ನು ಬಿಂಬಿಸುವ ಹಲವಾರು ಕಾಯಕಗಳನ್ನು ಗೈಯುತ್ತಿದ್ದಾರೆ.೨೦೦೫ ರಲ್ಲಿ ಸುಕ್ಷೇತ್ರ ಲಚ್ಯಾಣದಲ್ಲಿ ಜರುಗಿದ ಶ್ರೀ ಸಿದ್ದಲಿಂಗ ಮಹಾರಾಜರ ೧೫೫ ನೇ ಜಯಂತಿ ಜಂಗಮ ಆರಾಧನೆ ಹಾಗೂ ಲಕ್ಷದೀಪೋತ್ಸವ ರಾಜ್ಯ ಮಟ್ಟದ ಕಾರ್ಯಕ್ರಮ ಮಾಡಿ ಸಕಲ ಪೂಜ್ಯರ ಹಾಗೂ ಭಕ್ತರ ಮನ ಗೆದ್ದಿದ್ದಾರೆ.

ಇಂತಹ ದಿವ್ಯ ಹಿನ್ನೆಲೆ ಹಾಗೂ ಭವ್ಯ ಪರಂಪರೆ ಹೊಂದಿದ ಶ್ರೀ ಪೀಠಕ್ಕೆ ಈಗ ೬ ನೇಯ ಪೀಠಾಧಿಪತಿಗಳಾಗಿ ಶ್ರೀ ಪೂಜ್ಯ ಸಂಗನಬಸವ ದೇವರು ಇವರಿಗೆ ಶ್ರೀ ಪೀಠದ ಪೂಜ್ಯರ ತಪೋಬಲ ಹಾಗೂ ಭಕ್ತ ಸಮೂಹದ ಭಕ್ತಿ ಹಾಗೂ ಮಾರ್ಗ ಇರಲಿ ತನ್ಮೂಲಕ ಯುವ ಸ್ವಾಮೀಜಿಯವರು ಭವಿಷ್ಯದಲ್ಲಿ ಅಭಿನವ ಸಂಗನಬಸವ ರಾಗಿ ಸನ್ಮಾರ್ಗ ತೋರಲಿ ಎಂಬುದೇ ಭಕ್ತರ ಹಿರಿಯ ಆಶೆ 

By Anand

ಸಿಂಧೂರ ಸಾಮ್ರಾಜ್ಯ 24x7 ನ್ಯೂಸ್

Leave a Reply

Your email address will not be published. Required fields are marked *