

ವರದಿ. ಇರ್ಫಾನ್ ಬಿಳಗಿ ವಿಜಯಪುರ. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ( ರಿ) ಬೆಂಗಳೂರು ಹಮ್ಮಿಕೊಂಡಿದ್ದ ತನ್ನ 4ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ವಿಜಯಪೂರ ಜಿಲ್ಲೆಯ ಸಾಧಕರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತು ನೆಲಮಂಗಲದ ಪುಷ್ಪಭೈರೇಗೌಡ ಕನ್ವಕೇಶನ್ ಹಾಲನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘವು ತನ್ನ 4ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಹಳ್ಳದಗೆಣ್ಣೂರ ಗ್ರಾಮದ ಬೀಳಗಿ ತಾಲೂಕಿನ ಸಮುದಾಯ ಆರೋಗ್ಯ ಅಧಿಕಾರಿಗಳಾದ ಶ್ರೀಯುತ ಭೀಮರಾಯ ಚೂರಿ ಇವರು ಕೋರೋಣ ದಂತಹ ಮಹಾಮಾರಿ ರೋಗವು ಇಡಿ ದೇಶದಲ್ಲಿ ಯಾರು ಯಾರಿಗೆ ಮುಟ್ಟದಂತಹ ಭಯಾನಕ ವಾತಾವರಣ ಸೃಷ್ಟಿಸಿ ಎಷ್ಟು ಜನ ಜೀವನ ಮರಣ ಹೋರಾಟ ನಡಿಸಿ ಅದರಲ್ಲಿ ಎಷ್ಟು ತಮ್ಮ ಜೀವ ಕಳೆದು ಕೊಂಡರು ಅಂತಹ ವೇಳೆ ಎಲ್ಲಿ ವೈದ್ಯರು ತಮ್ಮ ಜೀವ ಲೆಕ್ಕಿಸದೆ ಲಕ್ಷಾಂತರ ಜನರ ಪ್ರಾಣ ಉಳಿಸಿದ್ದಾರೆ ಅಂತಾ ವೈದ್ಯರಲ್ಲಿ ಭೀಮರಾಯ ಚೂರಿ ತಮ್ಮ ಗ್ರಾಮ ಹಾಗೂ ಸುತ್ತಮುತ್ತಲಿನ ಅನೇಕ ರೋಗಿಗಳಿಗೆ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ್ದಾರೆ ತಮ್ಮ ಕಾಯಕವೇ ಮುಖ್ಯ ಎಂದು ನಂಬಿ ಬಡವರಿಗೆ ಸಹಾಯ ಮಾಡುವ ಸಮಾಜ ಸೇವೆಯನ್ನು ಮಾಡಿರುವ ಅವರಿಗೆ ಗುರುತಿಸಿ ಆರೋಗ್ಯ ಕಾಯಕ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರುವಿಸಲಾಯಿತು ಅದರಂತೆ ಆಲಮಟ್ಟಿ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಿ ಹಸಿರನಾಗಿಸಿ ಪ್ರವಾಸಿಗರಿಗೆ ಆಕರ್ಷಣೆ ಆಗುವಂತೆ ಪ್ರಮುಖ ಪಾತ್ರವಹಿಸಿ ಮತ್ತು ಅನೇಕ ಮುಖಂಡರು ಸಮಾಜ ಸೇವಕರು ಅಧಿಕಾರಿಗಳಿಂದ ಪ್ರಶಂಸೆ ಹಾಗೂ ಪ್ರಶಸ್ತಿ ಪಡೆದಿರುವ ಮತ್ತು ಅನೇಕ ಬಡವ ಬಗ್ಗರಿಗೆ ಸಹಾಯ ಸಹಕಾರ ನೀಡುವ ಶ್ರೀಯುತ ಮಹೇಶ್ ಎ ಪಾಟಿಲ್ ಅರಣ್ಯಾಧಿಕಾರಿಗಳು ಇವರನ್ನು ಸರ್ಕಾರಿ ಸೇವ ರತ್ನ ಎಂಬ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಸಂತೋಷ ಹೆಗಡೆ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ್ ಬಂಗ್ಲೆ ರಾಜ್ಯ ಕಾರ್ಯಾಧ್ಯಕ್ಷರಾದ ಇರ್ಫಾನ್ ಎಸ್ ಬೀಳಗಿ ರಾಜ್ಯ ಉಪಾಧ್ಯಕ್ಷರಾದ ಎಸ್ ಎಸ್ ಪಾಟೀಲ್ ವೇದಿಕೆಯ ಮೇಲಿದ್ದಅನೇಕ ಗಣ್ಯರು ಉತ್ತರ ಕರ್ನಾಟಕ ಉಸ್ತುವಾರಿ ಅಧ್ಯಕ್ಷರಾದ ಅಶೋಕ್ ರಾಥೋಡ್ ವಿಜಯಪುರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ವಿನಾಯಕ ಸೊಂಡೂರ, ಸಂಜೀವ ಕಾಶ ಪ್ರಶಾಂತ್ ಬಿರಾದಾರ್, ಸಾಧಿಕ್ ಅಂಗಡಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕಿನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು