ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ವಿಜಯಪುರ–1 ಮತ್ತು 2 ತಾಲೂಕಿನ ನೇತೃತ್ವದಲ್ಲಿಜ್ಞಾನವಿಕಾಸ ಸಂಯೋಜಕಿಯರ ಕ್ರಿಯಾಯೋಜನೆ ಸಭೆ

Written by

in

ವಿಜಯಪುರ : ಜಿಲ್ಲೆಯ ವಿಜಯಪುರ–1 ಹಾಗೂ –2 ತಾಲೂಕುಗಳ ಜ್ಞಾನವಿಕಾಸ ಸಂಯೋಜಕಿಯರ ಕ್ರಿಯಾಯೋಜನೆ ಸಭೆಯನ್ನು ನಗರದ ರುಡ್‌ಸೆಟ್ (RUDSET ಸಂಸ್ಥೆಯ ಸಭಾರಣದಲ್ಲಿ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮಕ್ಕೆ ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ಮೋಹನ್ ನಾಯಕ್, ವಿಜಯಪುರ–2 ಯೋಜನಾಧಿಕಾರಿಗಳಾದ ಶ್ರೀ ಸತೀಶ್, ವಿಜಯಪುರ–1 ಯೋಜನಾಧಿಕಾರಿಗಳಾದ ಶ್ರೀ ಕಲ್ಲನಗೌಡ, ಜ್ಞಾನವಿಕಾಸ ಸಮನ್ವಯಾಧಿಕಾರಿಗಳು ಹಾಗೂ ಜ್ಞಾನವಿಕಾಸ ಸಂಯೋಜಕಿಯರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಜಿಲ್ಲಾ ನಿರ್ದೇಶಕರು ಮತ್ತು ಎರಡು ತಾಲೂಕಿನ ಯೋಜನಾಧಿಕಾರಿಗಳು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.ನಂತರ ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ಮೋಹನ್ ನಾಯಕ್ ಅವರು ಜ್ಞಾನವಿಕಾಸ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಶಿಕ್ಷಣದ ಮಹತ್ವ, ಆರೋಗ್ಯ ಮತ್ತು ನೈರ್ಮಲ್ಯದ ಅರಿವು, ಮಹಿಳಾ ಹಕ್ಕುಗಳು, ಸರ್ಕಾರಿ ಯೋಜನೆಗಳ ಸದುಪಯೋಗ, ಹೊಸ ರುಚಿ ಪ್ರಾತ್ಯಕ್ಷಿಕೆ, ಕೌಶಲ್ಯ ದಿನ, ವಾತ್ಸಲ್ಯ ಕಾರ್ಯಕ್ರಮ, ನಾನು ಓದಿದ ಪುಸ್ತಕ, ಅಜ್ಜಿಯ ಕೈತುತ್ತು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಪ್ರತಿ ತಿಂಗಳ ಮಾಸಿಕ ಸಭೆಯಲ್ಲಿ ಕಡ್ಡಾಯವಾಗಿ ಹಮ್ಮಿಕೊಳ್ಳುವ ಕುರಿತು ಮಾಹಿತಿ ನೀಡಿದರು.ಅಲ್ಲದೆ ಪೌಷ್ಟಿಕ ಆಹಾರ, ಆರೋಗ್ಯ ತಪಾಸಣೆ ಶಿಬಿರ, ಸ್ವಉದ್ಯೋಗ ಪ್ರೇರಣಾ ಶಿಬಿರ, ಮಹಿಳಾ ವಿಚಾರಗೋಷ್ಠಿ, ಅಧ್ಯಯನ ಪ್ರವಾಸ ಹಾಗೂ ಕೇಂದ್ರಗಳ ವಾರ್ಷಿಕೋತ್ಸವ ಕಾರ್ಯಕ್ರಮಗಳ ಕುರಿತು ಸಮಗ್ರ ಮಾರ್ಗದರ್ಶನ ನೀಡಿದರು.ತದನಂತರ ವಿಜಯಪುರ–2 ಯೋಜನಾಧಿಕಾರಿಗಳಾದ ಶ್ರೀ ಸತೀಶ್ ಅವರು ಯೋಜನೆಯ ಯೂಟ್ಯೂಬ್ ಚಾನೆಲ್‌ಗೆ ಸಬ್‌ಸ್ಕ್ರೈಬ್ ಮಾಡುವಿಕೆ, ವಿನಿಯೋಗದರ ಬದಲಾವಣೆ ಹಾಗೂ ಕೇಂದ್ರಗಳ ದಾಖಲಾತಿಗಳ ಸಮರ್ಪಕ ನಿರ್ವಹಣೆ ಕುರಿತು ಮಾಹಿತಿ ನೀಡಿದರು.ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಜ್ಞಾನವಿಕಾಸ ಸಂಯೋಜಕಿಯರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Comments

Leave a Reply

Your email address will not be published. Required fields are marked *