
ಝಳಕಿ : ಸರ್ಕಾರದ ಕೆಲಸ ದೇವರ ಕೆಲಸ ಅನ್ನೋದಕ್ಕಿಂತ, ಜನ ಸಾಮಾನ್ಯರ ಕೆಲಸ ದೇವರ ಕೆಲಸ, ರಾಜ್ಯದ ತಾಲೂಕು, ಜಿಲ್ಲೆಯ ಎಲ್ಲ ಇಲಾಖೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ತಮ್ಮ ತಮ್ಮ ಕಚೇರಿಯಲ್ಲಿ ಲಭ್ಯ ಇರಲೇಬೇಕು ಎಂದು ಮಾನ್ಯ ಮುಖ್ಯ ಮಂತ್ರಿಗಳು ಡಿ. ಕೆ. ಶಿವಕುಮಾರ ತಿಳಿಸಿದರು. ಇಂಡಿ ತಾಲೂಕು ತಹಸೀಲ್ದಾರ್ ಇವರ ನೇತೃತ್ವದಲ್ಲಿ ಝಳಕಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಕರ್ನಾಟಕ ಸರ್ಕಾರ ನೌಕರರೊಂದಿಗೆ ಮುಖ್ಯ ಮಂತ್ರಿಗಳ ಸಂವಾದ ನೇರ ಸಂದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ರಾಜ್ಯದ ಎಲ್ಲ ಜಿಲ್ಲಾ , ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಕೆಲವೊಂದು ಸೂಚನೆಗಳನ್ನು ಅದೇಶಿಸಿದರು. ಎಲ್ಲ ತಾಲೂಕು, ಜಿಲ್ಲೆಯಲ್ಲಿನ ಪ್ರತಿ ಗ್ರಾಮಗಳಲ್ಲಿನ ನೀರಿನ ಸಮಸ್ಸೆ, ಶೈಕ್ಷಣಿಕ, ಕೃಷಿಕ, ಅರೋಗ್ಯ ಇಲಾಖೆ, ಕಂದಾಯ ಇಲಾಖೆ ಒಟ್ಟಾರೆ ಎಲ್ಲ ಇಲಾಖೆಯ ಅಧಿಕಾರಿಗಳು ಪ್ರತಿ ಕಚೇರಿಗಳಿಗೆ ತಾಲೂಕು ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಸಮಸ್ಸೆ 7 ದಿನಗಳಲ್ಲಿ ತಿಳಿಸಬೇಕು.
ಪ್ರತಿ ಗ್ರಾಮ ಪಂಚಾಯತನಲ್ಲಿ ಭಾರತ ಜೋಡೋ ಸಂಘಗಳನ್ನು ರೆಜಿಸ್ಟರ್ ಮಾಡಲೇಬೇಕು, ಪ್ರತಿ ಎರಡನೇ ಅಥವಾ ಮೂರನೇ ಶನಿವಾರ ಎರಡು ತಾಲೂಕುಗಳನ್ನು ಸಭೆ ಕರೆದು ಜನ ಸಾಮಾನ್ಯರ ಸಮಸ್ಸೆಗಳನ್ನು ಆಲಿಸುವದು, ವ್ಹಿಬಿಜಿ ರಾಮಜಿ ಯೋಜನೆ ಎಲ್ಲ ಕುಲಿಕಾರ್ಮಿಕರಗಿ ಸರಿಯಾಗಿ ಸಂಬಳ ಸರಿಯಾದ ಸಮಯಕ್ಕೆ ಮುಟ್ಟಿಸಬೇಕು , ಇದರಿಂದ ಗುಳೆ ಹೋಗುವದನ್ನು ತಪ್ಪಿಸಬಹುದು, ಪ್ರತಿ ತಾಲೂಕಿಗೆ ಒಂದು ಕೋಟಿ ಹಣ ಕೇವಲ ಕುಡಿಯೋ ನೀರಿಗಾಗಿ ಮಂಜೂರು ಮಾಡಲಾಗಿದೆ , ಅದನ್ನು ಕುಡಿಯೋ ನೀರಿಗಾಗಿ ಮಾತ್ರ ಬಳಕೆ ಮಾಡಬೇಕು.
ಪ್ರತಿ ತಾಲೂಕಿನ ಎಲ್ಲ ರೈತರು ಬೆಳೆ ವಿಮಾ ಮಾಡಿಸಬೇಕು, ವಿಮೆ ಕಂಪನಿಯಿಂದ ಹಿಂದೆ ರೈತರಿಗೆ ಸರಿಯಾದ ಪರಿಹಾರ ತಲುಪಿಲ್ಲ, ಅದಕ್ಕೆ ನಾವು ವಿಮೆ ಕಂಪನಿಗೆ ಸಭೆ ಕರೆದು, ಈ ಬಾರಿ ಎಲ್ಲ ವಿಮಾದಾರರಿಗೆ ಸರಿಯಾದ ಸಮಯಕ್ಕೆ ಪರಿಹಾರ ದೊರಕುವಂತೆ ತಿಳಿಸಲಾಗುವುದು, ಈ ಬಾರಿ ಮಳೆಯ ಅಭಾವವಿದ್ದು ನಮ್ಮ ರೈತರು ಬಿತ್ತನೆ ಮಾಡೋದು ಸರಿಯಾಗಿ ವಿಚಾರ ಮಾಡಬೇಕು, ಭಾರತ ಜೋಡೋ ಪ್ರತಿ ಸಂಘಕ್ಕೆ ಪ್ರತಿ ವರ್ಷ 10 ಲಕ್ಷ ಅನುದಾನ ಕೊಡಲಾಗುವುದು, ಅದನ್ನು ಸರಿಯಾದ ಯೋಜನೆ ರೂಪಿಸಿ ಬಳಕೆಆಡಬೇಕು , ನಮ್ಮ ರಾಜ್ಯ , ರಾಜ ಮಹಾರಾಜರ ಕಾಲದಿಂದಲೂ ಎಲ್ಲರನ್ನು ಸಮಾನ ಕಾಣುತ್ತ ಬಂದಿದೆ, ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೆಸರುವಾಸಿ, ಅದಕ್ಕೆ ಎಲ್ಲ ಅಧಿಕಾರಿಗಳು ಜನ ಸಾಮಾನ್ಯರ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು, ಕಚೇರಿಗೆ ಬಂದಂತಹ ಜನರಿಗೆ ಸ್ಪಂದಿಸಬೇಕು, ಜನರ ಸೇವೆ ಮಾಡೋದೇ ಅಧಿಕಾರಿಗಳ ಕರ್ತವ್ಯ, ಬಂದಂತಹ ಮಾಹಿತಿ ಪ್ರಕಾರ, ಭಾರತ ಜೋಡೋ ಸಂಘದ ರೆಜಿಸ್ಟರೇಷನನಲ್ಲಿ ಎಲ್ಲ ಸಮುದಾಯದ ಜನರಿಗೆ ಅವಕಾಶ, ಈ ಸಂಘ ಆಗಸ್ಟ್ ತಿಂಗಳಲ್ಲಿ ಮುಗಿಯಬೇಕು ಎಂದು ನೇರ ಸಂದರ್ಶನದಲ್ಲಿ ತಿಳಿಸಿದರು. ಮುಖ್ಯ ಮಂತ್ರಿಗಳ ಆದೇಶದ ಮೇರೆಗೆ ಎಲ್ಲ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಕಚೇರಿಗೆ ಬಂದಂತಹ ಜನ ಸಾಮಾನ್ಯರಿಗೆ ಗೌರವ, ಅವರ ಕೆಲಸಗಳನ್ನು ಅಚ್ಚುಕಟ್ಟಾಗಿ, ಬೇಗನೆ ನಿರ್ವಹಿಸಬೇಕು, ಈ ವಿಷಯವಾಗಿ ಮುಂದಿನ ತಿಂಗಳು ತಾಲೂಕು ಕಚೇರಿಯಲ್ಲಿ ಸಭೆ ಕರೆಯಲಾಗುವದು ಎಂದು ತಹಸೀಲ್ದಾರ್ ನಾಗೇಂದ್ರ ಕೊಳಶೆಟ್ಟಿ ಸಭೆಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಾದ ಪಿ. ಜೆ. ಕೊಡಹೊನ್ನ, ಲಕ್ಷ್ಮಣ ಪಾಟೀಲ್, ಶ್ರೀಕಾಂತ ಕಲ್ಮಡಿ, ಸತೀಶ ಪಾಟೀಲ್, ನರಸಪ್ಪ ಹಿಟ್ನಳ್ಳಿ, ಅರಣ್ಯ ಇಲಾಖೆಯ, ವಿದ್ಯುತ್ ಇಲಾಖೆ, ಕಂದಾಯ ಇಲಾಖೆ, ಅರೋಗ್ಯ ಇಲಾಖೆ, ಪೊಲೀಸ್, ನೀರಾವರಿ ಇಲಾಖೆ, ಶಿಕ್ಷಣ ಇಲಾಖೆ, ಇಂಡಿ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

