• Wed. Sep 9th, 2026

ಮಸೂತಿಯ ವೀರೇಶ್ವರ ವಿದ್ಯಾವರ್ಧಕ ಸಂಘ| ಐತಿಹಾಸಿಕ ಕ್ರಾಂತಿಗೆ ಸಾಕ್ಷಿ

ByAnand

Aug 11, 2026

64 ವರ್ಷದ ಬಳಿಕ ನೂತನ ಆಡಳಿತ ಮಂಡಳಿ ಸಂತೋಷ ಚನಗೊಂಡ ಅಧ್ಯಕ್ಷ, ಪ್ರಕಾಶ ಗಂಗಾಧರ ಉಪಾಧ್ಯಕ್ಷರಾಗಿ ಆಯ್ಕೆವರದಿ:ಮಹೇಶಕುಮಾರ ಹರಿಜನ ಕೂಲ್ಹಾರ : ಜಿಡ್ಡುಗಟ್ಟಿದ ಆಡಳಿತ ಮಂಡಳಿಯ ವಿರುದ್ಧ ಸಿಡಿದೆದ್ದ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮಸ್ಥರು ಸ್ಥಳೀಯ ಶ್ರೀ ವೀರೇಶ್ವರ ವಿದ್ಯಾವರ್ಧಕ ಸಂಘಕ್ಕೆ 64 ವರ್ಷದ ಬಳಿಕ ಭಾನುವಾರ ನೂತನ ಆಡಳಿತ ಮಂಡಳಿಯನ್ನು ನೇಮಿಸುವ ಮೂಲಕ ವಿನೂತನ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದರು.ಮಸೂತಿ ಗ್ರಾಮದಲ್ಲಿ ಬಂಥನಾಳ ಶಿವಯೋಗಿಗಳ ಕೃಪಾಶೀರ್ವಾದದಿಂದ 1962-63 ನೇ ಸಾಲಿನಲ್ಲಿ ಶ್ರೀ ವೀರೇಶ್ವರ ವಿದ್ಯಾವರ್ಧಕ ಸಂಘದಡಿ ಅಸ್ತಿತ್ವಕ್ಕೆ ಬಂದಿದ್ದ ಅನುದಾನಿತ ಶ್ರೀ ಗುರು ಸಂಗನಬಸವ ವಜ್ರ ಮಹೋತ್ಸವ ಪ್ರೌಢಶಾಲೆ 64 ವರ್ಷ ಗತಿಸಿದ್ದರೂಆಡಳಿತ ಯಂತ್ರಕ್ಕೆ ತುಕ್ಕು ಹಿಡಿದಿದೆ ಎಂದು ಆರೋಪಿಸಿದ ಗ್ರಾಮಸ್ಥರು ಕಳೆದ ಏಳೆಂಟು ವರ್ಷಗಳಿಂದ ಬದಲಾವಣೆಗಾಗಿ ಪಟ್ಟು ಹಿಡಿದಿದ್ದರು. ಯಾವುದೇ ಸಮರ್ಪಕ ಲೆಕ್ಕಪತ್ರವಿಲ್ಲದೇ, ಶೈಕ್ಷಣಿಕ ಗುಣಮಟ್ಟದಲ್ಲಿ ಬದಲಾವಣೆ ಕಾಣದೇ ಇರುವುದನ್ನು ಪ್ರಶ್ನಿಸಿ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಸೇರಿ ತಿಂಗಳ ಹಿಂದೆ ಪ್ರೌಢಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ್ದರು.ಗ್ರಾಮಸ್ಥರ ಆಕ್ರೋಶಕ್ಕೆ ಮಣಿದ ಹಾಲಿ ಆಡಳಿತ ಮಂಡಳಿ ಕೊನೆಗೂ ಭಾನುವಾರ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಕರೆದಿತ್ತು. ಈ ವೇಳೆ ಸಾಕಷ್ಟು ರೀತಿಯ ಆರೋಪ, ಪ್ರತ್ಯಾರೋಪ ನಡೆದು ನೂತನ ಆಡಳಿತ ಮಂಡಳಿ ರಚನೆಗಾಗಿ ಎರಡು ಬಣಗಳ ನಡುವೆ ಬಿರುಸಿನ ಚಟುವಟಿಕೆಯೂ ನಡೆಯಿತು.ಕೊನೆಗೂ ಸಂತೋಷ ಚನಗೊಂಡ ಬಣ ಮೇಲುಗೈ ಸಾಧಿಸುವ ಮೂಲಕ ಹೊಸ ಆಡಳಿತ ಮಂಡಳಿಯನ್ನು ಸದಸ್ಯರು ಕೈ ಎತ್ತುವ ಅಸ್ತಿತ್ವಕ್ಕೆ ತರಲಾಯಿತು.ಶಿಕ್ಷಣ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಜಿ.ಆ‌ರ್.ಬೀಳಗಿ, ಬಿ.ಎಂ.ಮೇಟಿ, ವಸತಿ ನಿಲಯದ ಅಧ್ಯಕ್ಷ ಎಸ್.ಕೆ.ಹಂಗರಗಿ, ಬಿ.ಎ.ಪಾಟೀಲ, ನ್ಯಾಯವಾದಿ ಎಸ್.ಎಸ್.ಗರಸಂಗಿ, ಪ್ರಕಾಶ ಕಾಗಲ್, ಪ್ರಮುಖರಾದ ಕೆ.ವಿ.ಕುಲಕರ್ಣಿ, ಸಿ.ಪಿ.ಪಾಟೀಲ, ಡಾ.ವೈ.ಕೆ.ಹೂಗಾರ, ಸಂತೋಷ ಚನಗೊಂಡ, ಸಂಘದ ಸದಸ್ಯರು ಮತ್ತಿತರರು ಇದ್ದರು.ಪೋಲಿಸ್ ಬಂದೋಬಸ್ತ್:ತೀವ್ರ ಜಿದ್ದಾಜಿದ್ದಿನ ನಡುವೆ ಶಿಕ್ಷಣ ಸಂಸ್ಥೆಯ ನೂತನ ಆಡಳಿತ ಮಂಡಳಿ ಆಯ್ಕೆ ಭಾನುವಾರ ನಡೆಯಿತು. ಈ ವೇಳೆ ತಲಾ ಮೂವರು ಪಿಎಸ್‌ಐ, ಎಎಸ್‌ಐ, 20 ಎಚ್‌ಸಿಪಿಸಿ, ಇಬ್ಬರು ಮಹಿಳಾ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ಸಂತೋಷ ಚನಗೊಂಡ ಬಣದವರು ಆಯ್ಕೆಯಾಗುತ್ತಿದ್ದಂತೆಯೇ ಅಭಿಮಾನಿಗಳು ಪರಸರ ಗುಲಾಲು ಎರಚಿ. ಸಿಡಿಮದ್ದು ಸಿಡಿಸಿ ಸಂಭ್ರಮಿಸಿದರು. ಗ್ರಾಮದ ವಿವಿಧ ದೇವಸ್ಥಾನಗಳಿಗೆ ತೆರಳಿ ಹರಕೆ ತೀರಿಸಿದರು.ಬಾಕ್ಸ್:ನೂತನ ನಿರ್ದೇಶಕ ಮಂಡಳಿಶ್ರೀ ವೀರೇಶ್ವರ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಸಂತೋಷ ಚನಗೊಂಡ, ಉಪಾಧ್ಯಕ್ಷರಾಗಿ ಪ್ರಕಾಶ ಗಂಗಾಧರ, ಪ್ರಧಾನ ಕಾರ್ಯದರ್ಶಿಯಾಗಿ ಈರಣ್ಣ ಬರಗಿ, ನಿರ್ದೇಶಕ ಮಂಡಳಿ ಸದಸ್ಯರಾಗಿ ಆನಂದ ಬಿಸ್ಟಗೊಂಡ, ಹನುಮಂತ ಕಾಗಲ್, ಬಸವರಾಜ ಸಾಲಹಳ್ಳಿ, ಬಸವರಾಜ ಹಂಗರಗಿ, ರಾಮಣ್ಣ ಯರಂತೇಲಿ, ವಿಶ್ವನಾಥ ಹಿರೇಮಠ, ಹನುಮಂತ ಕರಾಡೆ, ಸಿದ್ದಪ್ಪ ದಳವಾಯಿ, ಈರಣ್ಣ ತಳವಾರ, ರಮೇಶ ಪೋಳ, ಮಲ್ಲಯ್ಯ ಇಂಗಳಗಿ, ಈರಪನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಗೊಂಡರು.

By Anand

ಸಿಂಧೂರ ಸಾಮ್ರಾಜ್ಯ 24x7 ನ್ಯೂಸ್

Leave a Reply

Your email address will not be published. Required fields are marked *